ಕರ್ನಾಟಕದ ಬಡ ಮಕ್ಕಳ ಚಿಕಿತ್ಸೆಗೆ ಮಿಡಿದ ಸಚಿನ್ ತೆಂಡುಲ್ಕರ್ ಹೃದಯ!
ಕರ್ನಾಟಕ ಸಹಿತ 6 ರಾಜ್ಯಗಳ ಸುಮಾರು 100 ಬಡಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಮುಂದಾದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ
ನವದೆಹಲಿ: ಕರ್ನಾಟಕ ಸಹಿತ 6 ರಾಜ್ಯಗಳ ಸುಮಾರು 100 ಬಡಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮುಂದಾಗಿದ್ದಾರೆ. ಸಚಿನ್ ತೆಂಡುಲ್ಕರ್(Sachin Tendulkar) ಫೌಂಡೇಷನ್ ಮತ್ತು ಏಕಮ್ ಫೌಂಡೇಷನ್ ಜತೆಯಾಗಿ ಸರ್ಕಾರಿ ಮತ್ತು ಟ್ರಸ್ಟ್ ಆಸ್ಪತ್ರೆಗಳಲ್ಲಿ ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ಮತ್ತು ದುಬಾರಿ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗದೆ ಪರದಾಡುತ್ತಿರುವ ಬಡಕುಟುಂಬದ ಮಕ್ಕಳಿಗೆ ನೆರವಾಗಲಿದೆ.
'2013ರಲ್ಲಿ ಆದಂತೆ ಬಿಜೆಪಿ ಮತ್ತೆ ಇಬ್ಭಾಗವಾಗಲಿದೆ'
ಕರ್ನಾಟಕದ ಜತೆಗೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಮಕ್ಕಳಿಗೂ ತೆಂಡುಲ್ಕರ್ ಫೌಂಡೇಷನ್‌ನಿಂದ ನೆರವು ಸಿಗಲಿದೆ. ಈ ಮುನ್ನ ತೆಂಡುಲ್ಕರ್ ಫೌಂಡೇಷನ್‌ನಿಂದ ಅಸ್ಸಾಂನ ಕರಿಂಗಂಜ್ ಆಸ್ಪತ್ರೆಗೆ ವಿವಿಧ ವೈದ್ಯಕೀಯ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಗಿತ್ತು.
ಹಳ್ಳಿಹಕ್ಕಿ ಹೆಚ್ ವಿಶ್ವಾನಾಥ್ ‘ಬಿಗ್ ಶಾಕ್' ನೀಡಿದ ಹೈಕೋರ್ಟ್!
'ಸಚಿನ್ ತೆಂಡುಲ್ಕರ್ ಅವರ ಫೌಂಡೇಷನ್ ಜತೆಗೂಡಿ ನಾವು ಉತ್ತಮ ಕೆಲಸಗಳಲ್ಲಿ ತೊಡಗಿಕೊಂಡಿದ್ದೇವೆ. ಆರೋಗ್ಯದ ವಿಚಾರದಲ್ಲಿ ಸಚಿನ್ ಅಪಾರ ಕಾಳಜಿ ಹೊಂದಿದ್ದಾರೆ. ಬಡವರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸುರಕ್ಷೆ ಸಿಗಬೇಕೆಂಬುದು ಅವರ ಬಯಕೆಯಾಗಿದೆ' ಎಂದು ಏಕಮ್ ಫೌಂಡೇಷನ್‌ನ ಮ್ಯಾನೇಜಿಂಗ್ ಪರ್ಟ್‌ನರ್ ಅಮೀತಾ ಚಟರ್ಜಿ ತಿಳಿಸಿದ್ದಾರೆ.